ಮನಸ್ಸು ನಿಜಕ್ಕೂ ಕದಡಿದ ರಾಡಿಯಾಗಿದೆ.
ಬೆಂಗಳೂರಿನ Busy Lifeನಲ್ಲಿ ಬ್ಲಾಗ್ ಸಹವಾಸವೇ ಬೇಡವೆಂದಿದ್ದ ನನಗೆ ಈ ಎರಡು Photoಗಳು ಕತ್ತಿನ ಪಟ್ಟಿ ಹಿಡಿದು, ಕೆನ್ನೆಗೆರಡು ಬಿಗಿದು ಬರೆಯಲು ಕೂರಿಸಿವೆ. ನನ್ನ ಬರವಣಿಗೆಯಲ್ಲಾದರೂ ಅವುಗಳಿಗೆ ನ್ಯಾಯ ದೊರೆಯಬಹುದೆಂಬ ಭರವಸೆಯೊಂದಿಗೆ..!! ನಾನಾದರೋ ದಿಕ್ಕುಗೆಟ್ಟ ದಿಕ್ಪಾಲಕನಾಗಿದ್ದೇನೆ.
ಮರ ಇಳಿದು ಜೊತೆ ಹಿಡಿದು ಕೂಡಿ ಬಾಳಲು ಕಲಿತ ಮಾನವ ಪ್ರಕೃತಿಯನ್ನು ಬೆರಗುಗಣ್ಣಿನಿಂದ ನೋಡಿದ್ದಷ್ಟೇ ಅಲ್ಲದೆ ಅದಕ್ಕೆ ದೈವತ್ವವನ್ನೂ ಕರುಣಿಸಿದ. ನೋಡಿದ ಸೃಷ್ಟಿಯೇ ಬೆರಗಾಗುವಂತೆ ಸೃಷ್ಟಿಕ್ರಿಯೆಯಲ್ಲೂ ಪ್ರಾಮುಖ್ಯತೆ ಮೆರೆದ.
"ಋತುಮಾನ ಸಂಪುಟಕೆ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯಿ"
ನಂತರ, ಪ್ರಕೃತಿ ಅವನ ದೇವರಾಯಿತು, ಬದುಕಾಯಿತು, ಬಾಳಲ್ಲಿ ಹಾಸು ಹೊಕ್ಕಯಿತು. ಅವನು ಬೆಳೆಯುವ ಪ್ರತಿ ಹಂತದಲ್ಲೂ ಅವನ ಜೊತೆಗೂಡುವ ಅರಿಷಡ್ವರ್ಗಗಳಿಗೆ ಅಪವಾದದಂತಿರುವ ಮಕ್ಕಳಲ್ಲೂ ದೇವರನ್ನು ಹುಡುಕುವ ಪ್ರಯತ್ನ ಮಾಡಿದ. ಏಕೆಂದರೆ ದೇವರೂ ಮಕ್ಕಳಷ್ಟೇ ಮೃದುವಂತೆ, ನಿಷ್ಕಲ್ಮಶವಂತೆ ಹಾಗೇ ನಿಸ್ವಾರ್ತಿಯಂತೆ ಕೂಡ..!! ಮಧ್ಯಮ ವರ್ಗದಲ್ಲಿ ಜನಿಸಿದ ನಾನು ದೇವರ ಕುರಿತು ಎಷ್ಟೋ ಕೇಳಿದ್ದೇನೆ, ಓದಿದ್ದೇನೆ.."ದೇವರು ಸರ್ವ ಶಕ್ತ, ಕರುಣಾ ಮಾಯಿ, ಅನಾಥರಕ್ಷಕ, ದೀನ ಬಂಧು.. Blaa.. Blaa.. Bli... Bli... ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಹಲವು ಧರ್ಮಗಳಲ್ಲಿ ಅವನ ಹೆಸರು ಬೇರೆಯಾದರೂ ಅವನ ಶಕ್ತಿ ಸ್ವರೂಪ ಒಂದೇ.
" God never plays with dice"
"ವ್ಯಥೆಗಳ ಕಳೆಯುವ ಕಥೆಗಾರ ನಿನ್ನೀ ಕಲೆಗೆ ಯಾವುದು ಭಾರ"
"ಕರುಣಾಳು ಬಾ ಬೆಳಕೆ ಮುಸುಕಿಹುದು ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು"
ದಾಳದೊಡನೆ ಆಡದ ದೇವರ ಸೃಷ್ಟಿ ಅಚ್ಚು ತೆಗೆದಷ್ಟೇ ಸ್ಪಷ್ಟ. ಅವನೊಬ್ಬ ಅದ್ಭುತ ಕಲೆಗಾರ..ಪಥದಿಂದ ಸರಿಯದ ಗ್ರಹ ನಕ್ಷತ್ರಗಳನ್ನು ಸೃಷ್ಟಿಸುವುದು ಗೊತ್ತು, ಹರಿವ ನೀರಿಗೆ ದಿಕ್ಕು ತೋರಿಸುವವನೂ ಅವನೇ!! ಭೂಮಿಯ ಒಡಲಲ್ಲಿ ಲಾವಾಗ್ನಿಯನ್ನು ತುಂಬಿ, ಅದನ್ನು ಕವಚದಿಂದ ಬಿಗಿದು ಅದ ತಂಪಾಗಿಸಲು ಸಮುದ್ರಗಳನ್ನು ಸೃಷ್ಟಿಸಬೇಕೆನ್ನುವ Extraordinary Ideaಗಳೂ ಅವನಿಗೆ ಆಗಾಗ್ಗೆ ಬರುತ್ತವೆ.
ಅವನ ಕೌಶಲ್ಯವೆಷ್ಟು ಗೊತ್ತಾ?
"ನೆಲ್ಲಿಕಾಯಿ ಮರದೊಳಿತ್ತನೋ ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನೋ
ಹೆಣ್ಣಿನಲ್ಲಿ ಅಂದವಿಟ್ಟನೋ ನಮ್ಮ ಶಿವ ಗಂಡಿನಲ್ಲಿ ಆಸೆ ಇತ್ತನೋ
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ ಕಾಣದಂತೆ ಮಾಯವಾದನೋ
ನಮ್ಮ ಶಿವ ಕೈಲಾಸ ಸೇರಿಕೊಂಡನೋ"
Ooops... ಎಲ್ಲದರಲ್ಲೂ Perfection ಮೆರೆದ ದೇವರು ಕೊನೆಯ ಹಂತದಲ್ಲೇ ಕೈ ಕೊಟ್ಟು ಓಡುವಷ್ಟು Idiotic ಕೆಲಸ ಮಾಡಿದ್ದೇಕೆ? ನನಗಿನ್ನೂ ಅರ್ಥವಾಗುತ್ತಿಲ್ಲ.
ಮೇಲಿನ ಎರಡು ಚಿತ್ರಗಳನ್ನು ಕ್ಷಣ ಹೊತ್ತು ದಿಟ್ಟಿಸಿ ನೋಡಿ.. ಹೇಳಿ ಕೊಂಚವಾದರೂ ವ್ಯತ್ಯಾಸ ಕಾಣುತ್ತಿದೆಯೇ? ಸ್ನಿಗ್ದ ಮಂದಹಾಸ, ಹಾಲುಗಲ್ಲ, ಏನೋ ಹೇಳ ಬಯಸುವ ಕಣ್ಣುಗಳು, ಜಗತ್ತನ್ನೇ ತನ್ನಲ್ಲಡಗಿಸಲೆಂದೇ ಮೂಡಿರುವ ಮುಗ್ದತೆ ಎಲ್ಲ... ಎಲ್ಲಾ Similar. ಅಂತಹುದರಲ್ಲಿ ದೇವರು "ಧರ್ಮ-ಕರ್ಮ"ದ ಹೆಸರಿನಲ್ಲಿ "ಮೇಲು-ಕೀಳೆನ್ನುವ" ಆಟ ಈ ಮಕ್ಕಳೊಂದಿಗೂ ಆಡುವಷ್ಟು Saddist ಯಾಕಾದ?
ಸಾಕಂತೆ ಹತ್ತು ಪದಗಳ ಬದಲು ಒಂದು ಚಿತ್ರ.ಆದರೆ ಚಿತ್ರವೂ ತನ್ನ ಒಳಾರ್ಥವನ್ನು ಬಿಂಬಿಸುವುದರಲ್ಲಿ ಸೋಲುತ್ತದೆ ಎಂಬುದು ಎಷ್ಟು ಜನಕ್ಕೆ ಗೊತ್ತು?
ಈ ಹಂತದಲ್ಲಿ ಒಂದಾಗಿ ಕಾಣುವ ಈ ಮುಗ್ದ ಕಂದಮ್ಮಗಳ ಭವಿಷ್ಯವೂ ಒಂದೇ ಆಗಿರುತ್ತದೆಂಬ ವಿಶ್ವಾಸವೇನು? ಅದನ್ನು ನೆನೆದೆ ಮನಸ್ಸು ಕಳವಳಕ್ಕೀಡಾಗುತ್ತಿದೆ.ನಮ್ಮನ್ನು ಸೃಷ್ಟಿಸಿದ ದೇವರು ಒಂದೇ ಆದರೆ ನಾಮ ಹಲವು ಎಂದು ಜಗತ್ತಿಗೆ ಮನವರಿಕೆಯಾಗುತ್ತಿರುವ ಈ ಯುಗದಲ್ಲಿ ನಮ್ಮನ್ನು ಸೃಷ್ಟಿಸಿದ ದೇವರಿಗೇ ತಾನು ಸೃಷ್ಟಿಸುವ ಕಂದಮ್ಮಗಳಿಗೆ ಒಂದು ಉಜ್ವಲ ಭವಿಷ್ಯ ನೀಡಲಾಗದ್ದು ಅಪಹಾಸ್ಯದ ಪರಮಾವಧಿಯೇ ಸರಿ!!
ಹೇಳಿ, ಸರ್ವಶಕ್ತನೆಂಬ ದೇವರನ್ನು ಸೃಷ್ಟಿಸಿದ ಮಾನವನಿಗೆ ಅವನಲ್ಲಿ "Common Sense" ಇಡಲಾಗದಷ್ಟು ದೇವರು ಕಗ್ಗಂಟಾದನೇಕೆ?
ಕಾಣದ ದೇವರೊಡನೆ ಈ ಮಕ್ಕಳೂ ಅದೇ ಪ್ರಶ್ನೆ ಕೇಳುತ್ತಿರಬಹುದೇ?
ಯಾಕೋ ಕಣ್ಣು ತುಂಬಿಬರುತ್ತಿವೆ..ಬರವಣಿಗೆಯಲ್ಲಿ ಆ ಚಿತ್ರಗಳಿಗೆ ನ್ಯಾಯ ಒದಗಿಸುವಷ್ಟು ಶಕ್ತಿ ನನ್ನಲ್ಲಿಲ್ಲ..
ಕೊಸರು:
ದಿಗಂತದೆಡೆಗಿನ ಕಿರುನೋಟ ಅನ್ವೇಷಣೆಯೋ! ವಿಶ್ಲೇಷಣೆಯೋ !!
ಹಾಲ್ಗಂಗಳಲಿ ಬಾಳ ಪ್ರತಿಬಿಂಬ, ಕಪ್ಪೋ ಬಿಳುಪೋ
ಇರಲಿ ಬಣ್ಣದ ಕನಸು, ಚಿನ್ನದ ಬದುಕು
9 comments:
hey its simply superb avin...
nice article after long time
pಅವೀನ್,
ಇಂಥದ್ದನ್ನೆಲ್ಲ ನೋಡುವ ಮನಸ್ಸು ಬಹ ಕಡಿಮೆ ಜನರಿಗಿರುತ್ತೆ...ಪ್ರಶ್ನಿಸುವ ಎದೆಗಾರಿಕೆ ವಿರಳ.
ಅದೆರಡನ್ನೂ ಮಾಡಿದ್ದೀರಿ....ಅಭಿನಂದನೆಗಳು....ಅದ್ಭುತ ಲೇಖನ ...ಮನತಟ್ಟುವ ನಿರೂಪಣೆ.
ಬರವಣಿಗೆಯಲ್ಲಾದರೂ ಆ ಮಕ್ಕಳಿಗೆ ನ್ಯಾಯ ಒದಗಿಸುವ ನಿಮ್ಮ ಕಳಕಳಿಗೆ ನನ್ನ ಮನಃ ಪೂರ್ವಕ ಸಹಮತವಿದೆ.
ಮತ್ತಷ್ಟು ಬರೆಯಿರಿ...
ಶುಭ ಹಾರೈಕೆಗಳೊಂದಿಗೆ...
ಸುನಿಲ್.
ಮನಸ್ಸನ್ನು ಹಿಂಡುವ ಲೇಖನ.
Thanks Sunaath Sir,
Keep guiding me with your valuable comments
Yours
Aveen
ಅವೀನ,
ಇಂತವೇ ನವ ನವೀನ ಬರಹಗಳ್ನ ಬರೀತಿರು.... ಒಳ್ಳೇದಾಗ್ಲಿ....
ಅದ್ಭುತ ಲೇಖನ ಅವೀನ್ .. ನಮಗೂ ಈ ರೀತಿಯ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ... ಆದರೆ ನೀವು ಬರೆದ ಶೈಲಿ ಮತ್ತು ನಿರೂಪಣೆ, ನಿಮ್ಮ ಯೋಚನಾ ಲಹರಿ ಮಕ್ಕಳ ಚಿತ್ರಗಳ ಬಗ್ಗೆ, ದೇವರ ಬಗ್ಗೆ ಹಾಗು ಅದನ್ನು ವಿಭಿನ್ನವಾಗಿ ನಿರೂಪಿಸಿದ್ದಿರ .. ಮನಸ್ಸಿನ ಕದ ತಟ್ಟಿ, ಕಣ್ಣು ತುಂಬಿಸಿದ ಲೇಖನವಿದು.. ಯೋಚಿಸಿದಂತೆ ಯಥಾ ರೂಪದಲ್ಲಿ ತಿದ್ದುವ ನಿಮ್ಮ ಬರವಣಿಗೆ ಚೆನ್ನಾಗಿದೆ.. ಹೀಗೆ ಬರೆಯುತ್ತಾ ಇರೀ.
ಅವೀನ್, ತುಂಬಾ ಮೊನಚಾದ ಲೇಖನ . ಶುರುವಿನಿಂದ ದೇವರ ಅದಮ್ಯ ಶಕ್ತಿಯನ್ನು ಹೊಗಳುತ್ತ, ಅವನ ಜಾಣ್ಮೆಯನ್ನು ಮೆಚ್ಚುತ್ತ ಕೊನೆಗೆ ಮಾನವನಿಗೆ ಬತ್ತಿ ಇಟ್ಟ style ಚೆನ್ನಾಗಿದೆ :-)
"ಸರ್ವಶಕ್ತನೆಂಬ ದೇವರನ್ನು ಸೃಷ್ಟಿಸಿದ ಮಾನವನಿಗೆ ಅವನಲ್ಲಿ "Common Sense" ಇಡಲಾಗದಷ್ಟು ದೇವರು ಕಗ್ಗಂಟಾದನೇಕೆ?" ಈ ವಾಕ್ಯ ಬಹಳ ಮೆಚ್ಚುಗೆಯಾಯಿತು . ನಿಮ್ಮ busy lifeನಿಂದ ಕೂಡ ಸ್ವಲ್ಪ ಸಮಯ ತೆಗೆದು ಇಂಥಹ ಒಳ್ಳೆಯ ಲೇಖನ ಬರೆಯುವಂತೆ ಮಾಡಿದ , ನಮ್ಮ ವಿವೇಚನೆಗೆ ಕೆಲಸ ಕೊಟ್ಟ ಆ ಮಕ್ಕಳಿಗೆ ಧನ್ಯವಾದಗಳು.
Keep it UP Aveen..
devara mele nange bejarilla aveen.... adare yaro helilva....
devara aata ballavarraaru atana eduru nilluvaaraaru
kelade sukhava koduva, kelade dukkava koduva... tanna manabandante kunisi aaduva...
idakke tatvirudda...
aadisinoodu beelisi noodu uruli hogadu
ene barali yaarigu sootu taleya bAgadu
Yendigu nanu heegey eruvey, endu naguvudu
Heegey naguthaliruvudu
jeevana annodu , naavu elli vargu irteve annodu namage gottilla...adare baduka beku, chennage baduka beku anno aase irbeku....
ee lekhana tumbane chennagide, prashnegalu correcte....adare ' ravi kandaddu ravige, kavi kandaddu kavi ge' anno haage...jeevanada naveenategalannu kooda nodu, aase tanduko... jeevanadinda vimukhanaagabeda...
bejar madkobeda aytha..baiiona annisutte... baidre ayoooo ivaru kooda bejar maadikondrallappa antha umesh helo haage naa helolla :)
Post a Comment