ದೇವರನ್ನು ಸೃಷ್ಟಿಸಿದ ಮನುಷ್ಯ ತಾನು ಸೃಷ್ಟಿಸಿದ ದೇವರ ದೈವತ್ವಕ್ಕೆ ಏರುವ ಎಲ್ಲಾ ಹಂತದಲ್ಲೂ ಮುಗ್ಗರಿಸಿದ್ದಾನೆ. ಹಿಂದುವೋ, ಕ್ರಿಸ್ತನೋ, ಮುಸಲ್ಮಾನನೋ, ಯಾವನೋ ತಾನೇ ಸೃಷ್ಟಿಸಿದ, ಬದುಕುತ್ತಿರುವ ಧರ್ಮದ ತಿರುಳಿನ ಭಾಗ ಜೀವನಕ್ಕಿಂತ ಪುಸ್ತಕದಲ್ಲೇ ಕಾಣಲು ಇಚ್ಚಿಸುತ್ತಾನೆ. ಕೊಂಚ ಎಡವಟ್ಟಾಗಿ ನಿಜಕ್ಕೂ ಕಾಣ ಬೇಕು ಅಂದರೆ ತನ್ನ ಪಕ್ಕದ ಮನೆ, ರಾಜ್ಯ ದೇಶದಲ್ಲಿ ಕಾಣಬಯಸುತ್ತಾನೆಯೇ ಹೊರತು ತನ್ನ ಮನೆ, ರಾಜ್ಯ ದೇಶದಲ್ಲಲ್ಲ.
ಎಡವುವ ಹೆಜ್ಜೆ ಒಬ್ಬರಲ್ಲಿ ಕಮ್ಮಿ ಇರಬಹುದು ಒಬ್ಬರದು ಹೆಚ್ಚಿರಬಹುದು. ನೈಜ್ಯ ಕಾಳಜಿಯಿಂದ ಎಲ್ಲವನ್ನೂ/ಎಲ್ಲರನ್ನೂ ಶಿಕ್ಷಿಸುವುದು ಶಿಕ್ಷಿತರ ಧರ್ಮ. ಅದಕ್ಕೆ ಹಿಂದೂ, ಮುಸಲ್ಮಾನ, ಕ್ರಿಸ್ತ ಅನ್ನೋ ಭೇದ ಬೇಕಾ?
ಯಾಕೋ ಗಂಟು ಮಾಡುವ ಪೂಜಾರಿ ಚಿತ್ರಿತವಾದಷ್ಟು ವ್ಯಂಗ್ಯವಾಗಿ ಅನಾಚಾರ ಮಾಡಿದ ಪಾದ್ರಿಗಳು, ಹಾರದ ಮಾಡಿದ ಮುಲ್ಲಾಗಳು ಚಿತ್ರಿತವಾಗಿಲ್ಲ. ಪಾಪಾಕ್ಕೂ partiality ಇದ್ಯಾ ತಂದೆ?
1 comment:
ಸತ್ಯದ ದರ್ಶನ ಕಹಿಯಾಗಿರುತ್ತದೆ, ಅಲ್ಲವೆ?
Post a Comment