Saturday, December 31, 2011

ಮತ್ತೆ ಹಾಡಲಿ ಕೋಗಿಲೆ...!!


ಒಂದು ವರ್ಷ ಅನುಭವದಲ್ಲಿ ಪಕ್ವತೆಗಳಿಸಿದ್ದಕ್ಕೆ ಖುಷಿಪಡಬೇಕೋ,  ಬದುಕಿನ ಮುತ್ತಿನ ಹಾರದಲ್ಲಿ ಒಂದು  ಮುತ್ತು ಕಮ್ಮಿಯಾಗಿದ್ದಕ್ಕೆ ಕಸಿವಿಸಿಪಡಬೇಕೋ... ಅರ್ಥವಿಲ್ಲದ ಆಲಾಪ.

"ಒಳ್ಳೆ ಕ್ಷಣಗಳ ಕೂಡಿಡಬೇಕು, ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ"

ರೂಪಾಯಿ, ಚಿನ್ನ ಬೆಳ್ಳಿಯ ಹಗ್ಗ ಜಗ್ಗಾಟದಲ್ಲಿ ನಲುಗಿದ ಮಧ್ಯಮವರ್ಗ, ಭ್ರಷ್ಟಾಚಾರದ ವಿರುದ್ದದ  ಕಣ್ಣಾಮುಚ್ಚಾಲೆಯಲ್ಲಿ ಗೆದ್ದು ಸೋತ ಜನತೆ,  ಜಗತ್ತಿನೆಲ್ಲೆಡೆ ಕ್ರಾಂತಿಯ ಹೆಸರಿನಲ್ಲಿ ಉರುಳಿದ ಗದ್ದುಗೆಗಳು,  ಈ ಎಲ್ಲಾ ಭಾನಗಾಡಿಗಳ ಮಧ್ಯೆ ಸದ್ದಿಲ್ಲದೇ ಕರಗಿಹೋದ ಧ್ರುವಗಳ ಹಿಮಪದರ, ಇಳಿಯದ ಥರ್ಮೋಮೀಟರ್ ಪಾದರಸ.

ಬರುವ ಮನ್ವಂತರ ಬಳಲಿದ ಮನಗಳಿಗೆ ಹೊಸ ಚೇತನವನ್ನು ತರಲಿದೆಯೆಂಬ ಭರವಸೆಯಲ್ಲಿ

ಹಾರೈಕೆಯೊಂದಿಗೆ,
ನಿಮ್ಮ
ಅವಿ

2 comments:

ಮಂಜುಳಾದೇವಿ said...

ಹೊಸ ಆಶಯಗಳೊಂದಿಗೆ ೨೦೧೨ ನ್ನು ಸ್ವಾಗತಿಸೋಣ.ನಿಮಗೆ ಶುಭಾಶಯಗಳು

sunaath said...

ಹೊಸ ವರ್ಷವು ನಿಮಗೆ ಮಂಗಲಕರವಾಗಲಿ!