ಮೊದಲಿಂದಲೂ ಕೊಂಚ ಹಾಗೆಯೇ!!! ಒಂದೇ ನಾಣ್ಯದ ಎರಡು ಮುಖದಂತಿರುವ ಈ ಇಬ್ಬರಲ್ಲೂ ತಮ್ಮದೇ ಆದ ಸಾಧು ಸಾಧು ಅನ್ನುವಷ್ಟು ಪ್ರಾತ್ಯೇಕಿಕ ಉಪಮಾನ. ಮದುವೆಯಾಗಿ ಮಕ್ಕಳು-ವಂದಿಗರಾದ ಮೇಲೆ ಮರೆತಿದ್ದ ಮೋಕ್ಷದ ಬೆನ್ನು ಹತ್ತಿದ ಬುದ್ದ, ಊರಿಗೆಲ್ಲ ಮೋಕ್ಷದ ಗುಟ್ಟು-ರಟ್ಟು ಮಾಡಿ ತಾನೇ ಮೊಕ್ಷವಿಲ್ಲದೆ ಸತ್ತ ಕೃಷ್ಣ ಇವತ್ತಿಗೂ ನನ್ನ ಊಹೆಗೆ ನಿಲುಕದ ವ್ಯಕ್ತಿತ್ವಗಳು. ಇಬ್ಬರಲೂ ಕೊಂಚ ಹೆಚ್ಚೇ ಅನ್ನುವ ಒಳ್ಳೆಯ ಗುಣಗಳಿತ್ತು.... ಛೆ! ಛೆ!! ಹೀಗೇಕೆ ಅಂತ ಕೇಳುವ ಕೆಟ್ಟ[?] ಗುಣಗಳೂ ಇದ್ವು. ಜಗತ್ತಿದೆ ಶಾಂತಿ ಭೋದಿಸಿ ಜಗತ್ತಿನ ಶಾಂತಿ ಕೆಡಿಸಿದ ಬುದ್ದನ ಹಾಗು ಜಗತ್ತಿಗೆ ಸಮರದ ಪಾಠ ತಿಳಿ ಹೇಳಿ ಅದಕ್ಕೊಂದು ಚವ್ಕಟ್ಟನಿಡದ ಕೃಷ್ಣನ ಕುರಿತು ನನ್ನ ಮನದ ತುಮುಲವೇ ಈ ಅಂಕಣ. ಇದು ನನ್ನ ಸ್ವಗತವಷ್ಟೇ.... ಯಾರಿಗೋ ಹೇಳುವ, ಕಾಲೆಳೆಯುವ ಹುನ್ನಾರವಿಲ್ಲ... ಬುದ್ದನ ಆಣೆ, ಕೃಷ್ಣನ ಪ್ರಾಮಿಸ್.
ಯಾರಿಗೆ ತಿಳಿದಿಲ್ಲ ಈ ಇಬ್ಬರ ಜೀವನ ಚರಿತ್ರೆ...? ಹುಟ್ಟುತ್ತಲೇ ಪರಾವಲಂಬಿಯಾಗಿ ಪರರ ಸುಖದಲ್ಲೇ ಸುಖ ಕಂಡು ಪರಮಾತ್ಹ್ಮನಾದ ಕೃಷ [ಜೈಲಿಂದ ಪಾರಾರಿ, ಬೃಂದಾವನದ ಮುರಾರಿ, ಗೋಕುಲವಾಸಿ, ಕಂಸ ವಧೆ, ಅನರ್ತ ಪಯಣ, ರಾಧೆಯ ಪ್ರೇಮ-ಪ್ರಸಂಗ, ಕುರುಕ್ಷೇತ್ರ, ಪಾಂಡವ ಪಕ್ಷಪಾತಿ,ಯಾದವಿ ಕಲಹ, ದಾರುಣ ಅಂತ್ಯ], ಹಾಗೂ ಸುಖದ ಆಸೆಯಲ್ಲೇ ದುಖದ ಸೆಲೆ..So, ಆಸೆಯ ಮಾಯಾಜಿಂಕೆಯ ಬೆನ್ನೇರುವ ಉತ್ಕಟೆಯೇ ಬೇಡವೆಂದು ಬುದ್ದ [ರಾಜ ಜೀವನ, ವೈಭವೊಪಿತ ಮದುವೆ, ಪುಟ್ಟ ಕಂದ, ಜಗತ್ತು ಮಲಗಿದಾಗ ಅವನೊಬ್ಬ ಎದ್ದ, ಒಬ್ಬನೇ ಮನೆಯಿಂದ ಹೊರಬಿದ್ದ, ಮೊಕ್ಷದೊಡನೆ ಆದ ಬುದ್ದ, ನಂತರ ಧರ್ಮ ಪ್ರಸಾರ, ನಿರ್ವಾಣ]. ಎಲ್ಲರೂ ಕೇಳಿದ್ದೆ, ತಿಳಿದಿರುವಂಥದ್ದೆ, ವಿಶೇಷ ಇರುವುದು ಅವರು ಪ್ರತಿಪಾದಿಸಿದ ತತ್ವಗಳಲ್ಲಿ, ಬಾಳಿದ ಆದರ್ಶದಲ್ಲಿ.
ಅನ್ಯಾಯವೆಂದು ತಿಳಿದೂ ಸಂಧಿ ಕಾರ್ಯಕ್ಕಾಗಿ ಧುರ್ಯೋಧನನಲ್ಲಿಗೆ ಹೋಗಿ ಉಪಯೋಗವಿಲ್ಲದೇ ಹಿಂತಿರುಗಿ ಶುರುವಾದ ಕುರುಕ್ಷೇತ್ರದ ಆರಂಭದಲ್ಲೇ ಅರ್ಜುನ ಸ್ವಕುಟುಂಬ-ಬಂಧು-ಗುರುಗಳಾದಿಗಳ ಮೇಲೆ ಯುದ್ದ ಮಾಡಲು ಒಲ್ಲೆನೆಂದು ಈ ಕಾರಣ ಕೊಡುತ್ತಾನೆ.
ಅರ್ಜುನ:" ಕೃಷ್ಣ, ಎಂಥಾ ಹೀನ ಕೆಲಸ ಮಾಡುತ್ತಿದ್ದೇನೆ, ರಾಜ್ಯದಾಸೆಗಾಗಿ ನನ್ನ ಅಣ್ಣ-ತಮ್ಮ-ಗುರುಗಳು ಬಂಧು ಬಾಂಧವರನ್ನೇ ಕೊಲ್ಲಹೊರಟಿದ್ದೇನೆ. ಇಂಥಾ ನೀತಿವಂಥರನ್ನು ಕೊಂದು ನಾನು ಗೆದ್ದರೂ ಎಲ್ಲಾ ಪಡೆದು ಸೋಲುನ್ಡಂತೆ ಅಲ್ಲವೇ? ಅಪಾರ ಜೀವ ಹಾನಿಯಾಗಿ ಗೆದ್ದವರು ಸೋತವರ ಹೆಣ್ಣುಗಳನ್ನು ಕೂಡುವುದು.. ಇಲ್ಲಾ ಕಾಮದಾಸೆಗೆ ಬಲಿಯಾಗಿ ಗೆದ್ದವರ ಪತಿವಿಯೋಗಿತ ಹೆಣ್ಣುಗಳೇ ಪರ ಗಂಡಸಿನ ಸಂಗಕ್ಕೆ ಹಾತೊರೆಯುವುದು.. ಒಟ್ಟಿನಲ್ಲಿ ವರ್ಣಸಂಕುಲ ಘಟಿಸುತ್ತದಷ್ಟೇ. ನನಗೆ ಯುದ್ದ ಬೇಡ.. ನಾನು ನಿವೃತ್ತನಾಗುತ್ತೇನೆ".
ಈಗ ಕೃಷ್ಣ ನಿಜವಾದ ನಿಷ್ಪಕ್ಷಪಾತ, ಬದುಕಿನ ಪೂರ್ಣ ಗ್ರಹಿಕೆ, ಅನುಭವದ ಉಚ್ಚ ಮಟ್ಟದಲ್ಲಿ ನಿಂತು ಅವನನ್ನು ಎಚ್ಚರಿಸುತ್ತಾನೆ [ಗಮನಿಸಿ, ಎಚ್ಚರಿಸುತ್ತಾನಷ್ಟೇ, ಹೀಗೇ ಮಾಡು, ಇದೇ ದಾರಿ, ಇದಿಲ್ಲದಿದ್ದರೆ ನಿಂಗೆ Life ಇಲ್ಲಾ .. You are finished ಅಂತೆಲ್ಲ ಹೆದರಿಸೋಲ್ಲ.. He gives options].
ಕೃಷ್ಣ: ಅರ್ಜುನ, ನಿನ್ನ ಪ್ರತಿಪಾದನೆಯೇ ವಿಚಿತ್ರ,.. ಗುರು ಹಿರಿಯರೆಲ್ಲ ನೀತಿವಂತರು ಅನ್ನುತ್ತೀಯ, ಹಾಗಾದರೆ ಅವರೆಲ್ಲರೂ ಧುರ್ಯೋಧನನಿಗೆ ಒತ್ತಸೆಯಾಗಿದ್ದರೆ ಅಂದ ಮೇಲೆ.. ಅವರು ನ್ಯಾಯದ ಕಡೆಗಿದ್ದಾರೆಂದೇ ಅರ್ಥ... ಅಂದ ಮೇಲೆ ಧುರ್ಯೋದನ ಹೇಳಿದ್ದು ಸರಿಯೇ.. ನೀವೆಲ್ಲ ಪಾಂಡುವಿನ ಮಕ್ಕಳಲ್ಲ. ಮಾದ್ರಿ ಕುಂತಿಯರಿಗೆ ಹಾದರಕ್ಕೆ ಹುಟ್ಟಿದವರು.., ನ್ಯಾಯ ರಕ್ಷಣೆಗಾಗಿ ಮಹಾಯುದ್ದಗಳಾಗುವುದು, ಜನ ಸಾಯುವುದು, ನೀನು ಹೇಳಿದಂತೆ ವರ್ಣಸಂಕುಲವಗುವುದು ಸಹಜವೇ,. ಮುಖ್ಯ ನ್ಯಾಯದ್ದು. ನೀನು ಯುದ್ದ ಮಾಡದಿದ್ದರೂ ನಿನ್ನ ಅಣ್ಣ ತಮ್ಮಂದಿರು ಮಾಡುತ್ತಾರೆ, ದುಷ್ಟದ್ಯುಮ್ನ ಮಾಡುತ್ತಾನೆ, ನಿನ್ನ ಕಡೆ ಇರುವ ಅತಿರಥ ಮಹಾರಥರು ಮಾಡುತ್ತಾರೆ.. ನೀನು ಬೇಕಾದರೆ ಮನೆಯಲ್ಲಿ ಕುಳಿತು ಧರ್ಮ ವ್ಯಾಖ್ಯಾನ ಮಾಡು".
ಅಷ್ಟೇ, ಅರ್ಜುನ ತನ್ನ ಮನಸ್ಥಿತಿ ಬದಲಾಯಿಸಿ ಯುದ್ದಕ್ಕೆ ಅಣಿಯಾಗುತ್ತಾನೆ. ನ್ಯಾಯಪರತೆಯ ಕಟೋರತೆ ಇರುವುದೇ ಇಲ್ಲಿ.ಗಮನಿಸಬೇಕಾದ ಒಂದು ಮಹತ್ವಪೂರ್ಣ ಅಂಶವೆಂದರೆ ಇಲ್ಲಿ ಮಾನವೀಯ ಸಂಬಂಧಗಳಿಗೆ ಎಡೆಯಿಲ್ಲ, ಅಧರ್ಮ ಮಾಡಿದವರು ಬಂಧುಗಳೇ ಆದರೂ ಅವರಿಗೆ ಶಿಕ್ಷೆ ಶತಃಸಿದ್ಧ ಎಂಬ ಸಂದೇಶ. ಅರ್ಜುನನಿಗೆ, ನಿನಗಾಗಿ ಹೋರಾಡು ಎನ್ನೋದಿಲ್ಲ. ರಾಜ್ಯಕ್ಕಾಗಿ ಬಡಿದಾಡು ಅನ್ನೋಲ್ಲ, ನ್ಯಾಯಕ್ಕಾಗಿ ಹೋರಾಡು ಅನ್ನುತಾನೆ. ಸೋಲು ಗೆಲುವು ನಿನ್ನದಲ್ಲ ಅಂದ ಮೇಲೆ ನಿನ್ನವರು ತನ್ನವರೆಂದು ಕಾಯುವುದರಲ್ಲಿ ಅರ್ಥವಿಲ್ಲ ಎನ್ನುತ್ತಾನೆ. ನಿನ್ನ ಕರ್ಮವನ್ನು ನೀನು ಮಾಡ ಬಹುದು..ಅದರ ಫಲದ ಮೇಲೆ ನಿನ್ನ ಹಿಡಿತವಿಲ್ಲ ಅಂತ ಎಚ್ಚರಿಸುತ್ತಾನೆ. ಅಂತೆಯೇ ಮಾನವನ ವರ್ಗವನ್ನು ಅವನ ದುಡಿಮೆಯ ಆಧಾರದಲ್ಲಿ ಕೃಷ್ಣನೇ ವಿಂಗಡಿಸುತ್ತಾನೆ. ವಿದ್ಯೆಯನ್ನು ಭೋಧಿಸುವನು ಬ್ರಾಹ್ಮಣ, ಕಾಯುವನು ಕ್ಷತ್ರಿಯ, ಮಾರುವನು ವೈಶ್ಯ ಇವರೆಲ್ಲರಿಗೂ ಸಹಾಯಕನಾಗಿ ಸಮಾಜದ ಆಧಾರ ಸ್ಥಂಬವಾಗಿರುವ ಶೂದ್ರ. ಬ್ರಾಹ್ಮಣ ಮಗ ಹುಟ್ಟು ಬ್ರಾಹ್ಮಣನಲ್ಲ ಎಂಬ ಸೈದ್ಧಾಂತಿಕ ನಿಲುವನ್ನ ಕೃಷ್ಣ ವ್ಯಕ್ತಪಡಿಸುತ್ತಾನೆ. [ಅರ್ಥ ತಿಳಿಯದ ಹಲವು ಗೊಡ್ಡು ಬ್ರಾಹ್ಮಣರು ಸ್ವಾರ್ಥ ಸಾಧನೆಗೆ ತಮ್ಮದೇ ಒಂದು ಅರ್ಥ ಸೃಷ್ಟಿಸಿದರು, ನೀತಿ ತಿಳಿಯದ ಈ ಹೊಲಸು ರಾಜಕೀಯ ಜನರು ಅದನ್ನೇ ಮುಂದುವರೆಸಿದ್ದಾರೆ]
ಒಮ್ಮೆ ಭಗವದ್ಗೀತೆಯನ್ನ ಓದಿ... ಕೃಷ್ಣನ ಇಂಥ ಹತ್ತು ಹಲವು ವಾಣಿಗಳು ನಿಮಗೆ ಸಿಗುತ್ತವೆ, ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃಆತ್ಮವನ್ನು ಶಸ್ತ್ರವು ಕಡಿಯಲಾರದು, ಬೆಂಕಿ ಸುಡಲಾರದು ಮತ್ತು ಗಾಳಿಯು ಒಣಗಿಸಲಾರದು. ಶರೀರ ಒಮ್ಮೆ ಗಳಿತವಾದ ನಂತರ ಅದು ಇನ್ನೊಂದು ದೇಹವನ್ನು ಪ್ರವೆಸಿಸುತ್ತದೆ. ಇಂಥಾ ಕ್ಷಣಿಕ ದೇಹದಲ್ಲಿ ಉಂಟಾದ ಮಮತೆಯಿಂದ ನೀನು ಧರ್ಮ ಬಾಹಿರನಾಗಬೇಕಾಗಿಲ್ಲ. ...ಒಂದು ಮಾತನ್ನ ನೀವಿಲ್ಲಿ ಗಮನಿಸಬೇಕು, ಧರ್ಮಕ್ಕಾಗಿ ಸ್ವಂತ ಅಣ್ಣ-ತಮ್ಮನನ್ನೇ ಕೊಲ್ಲು, ಬಂಧುಗಳನ್ನೇ ಬಲಿ ನೀಡು ಎನ್ನುವ ಇಸ್ಲಾಂ ವಾಕ್ಯದ "ಧರ್ಮಕ್ಕೂ"..ಕೃಷ್ಣನ ಧರ್ಮದ ವ್ಯಾಖ್ಯಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಸ್ಲಾಮಿನ ಧರ್ಮಕ್ಕಾಗಿ ಬಲಿ ತತ್ವ ಒಂದು ಪಂಗಡಕ್ಕಾದರೆ ಕೃಷ್ಣನ ಧರ್ಮಕ್ಕಾಗಿ ಬಲಿ ಕೇವಲ ನೀತಿಗೆ, ನ್ಯಾಯಕ್ಕೆ.
ಮಾನವೀಯ ಸಂಬಂಧಗಳ ಬಗ್ಗೆ ಬಂದಾಗ, ಶ್ರೀಕೃಷ್ಣನು ತನ್ನ ಪರಿಪೂರ್ಣತೆಯನ್ನು ಮರೆಯುತ್ತಾನೆ...ಕಾಮದಲ್ಲಿ ಹೇಗೆ ಯಾವುದೂ ನಿಷಿದ್ದವಲ್ಲವೋ ಹಾಗೆ ಮನುಷ್ಯ ಪ್ರೇಮದಲ್ಲೂ ಯಾವುದೂ ವರ್ಜ್ಯವಲ್ಲೆಂದು ಹೇಳಿ ಹಾಗೆ ಬಾಳುತ್ತಾನೆ. ಸಕಲ ಪುರುಷಾರ್ಥಗಳಲ್ಲೂ ಕೃಷ್ಣ ಮೆರೆಯುತ್ತಾನೆ. ಅವನ ಬಾಲ್ಯದ ತುಂಟಾಟಗಳು ಯಾರಿಗೆ ತಾನೇ ಪ್ರಿಯವಲ್ಲ? ಯವ್ವನದ ಕೃಷ್ಣನ ತೂಕ ಭರಿತ ಪ್ರೇಮ ಸುಧೆ ಇಂದಿಗೂ ಮಾನವರೆದೆಯಲ್ಲಿ ಹರಿಯುತಲಿದೆ. ಗೃಹಸ್ಥನಾಗಿ ಪರಿಪೂರ್ಣತೆಯ ಮೂರ್ತಿಯಾಗಿ ಪಾಂಡವರು ತಮ್ಮ ಸಹೋದರರನ್ನು, ಅಜ್ಜ, ಗುರು ಮತ್ತಿತರ ಬಂಧು ಬಾಂಧವರನ್ನು ಕೊಲ್ಲಲು ಪ್ರೇರಣೆಯಾಗಿದ್ದು, ಅದೇ ಬಾಂಧವ್ಯದಲ್ಲೇ ದ್ರೌಪದಿಯ ವಸ್ತ್ರಾಪಹರಣ ತಡೆದಿದ್ದು,ಅಂತಃಕರಣದಲ್ಲಿ ಕುಚೆಲನೊಡನೆ ಬೆರೆತದ್ದು...ಜನಸಾಮಾನ್ಯರಂತೆ ಹಲವರು ಹೆಂಡಿರ ಮುದ್ದಿನ ಗಂಡನಾಗಿ ಪಾಡುಪಟ್ಟಿದ್ದು, ಹೀಗೇ ಹತ್ತು ಹಲವು ಎಡೆಯಲ್ಲಿ ಕೃಷ್ಣ ನಮಗೆ ಗೋಚರಿಸುತ್ತಾನೆ. ನಮ್ಮಲ್ಲಿ ನಮ್ಮವನಾಗುತ್ತಾನೆ.. ನಮ್ಮವನಾಗುತ್ತಲೇ ನಾನು ನಿಮ್ಮನ್ಥಲ್ಲ.. ನೀವು ನನ್ನಂತಾಗಬೇಕೆಂಬ ಹಂಬಲವನ್ನ ನಮ್ಮಲ್ಲಿ ತುಂಬುತ್ತಾನೆ.. ಬದುಕೆಂಬ ಕಾಮನಬಿಲ್ಲಿನಲ್ಲಿ ಏಳೂ ಬಣ್ಣಗಳ ಮಹತ್ವವನ್ನ ಅವನದೇ ಹಾದಿಯಲ್ಲಿ ತಿಳಿಸುತ್ತಾನೆ. ಕೃಷ್ಣ ಒಂದು ಸಾಗರ. ಅವನಲ್ಲಿ ಎಲ್ಲವೂ ಇದೆ. ದಡದ ತಟದಲ್ಲಿ ಕಿಲ ಕಿಲ ನಲಿದಾಡುವ ಎಳೆ ಅಲೆ, ಪ್ರಶಾಂತ, ಗಾಂಭೀರ್ಯ, ರೌದ್ರ, ಅಂತರ್-ಪ್ರವಾಹ, ಜೀವ ಸೆಲೆ ಎಲ್ಲಾ ಎಲ್ಲಾವೂ ಇದೆ. ಸಮಸ್ತ ಜೀವಿಗಳಿಗೆ ಬೇಕಾದ ಸಮಸ್ತವೂ ಆ ಸಾಗರದಲ್ಲಿದೆ.
ಆದರೆ ಬುದ್ದನಲ್ಲಿ ನಿಮಗೆ ಈ ಪರಿಯ Varity ಕಾಣುವುದಿಲ್ಲ...ಏಕೆಂದರೆ ಒಬ್ಬ ಸಾಕಾರದ ಕುರುಹಾದರೆ, ಮತ್ತೊಬ್ಬ ನಿರಾಕಾರದ ಪ್ರತಿವಾದಿ. ಜೀವನ ಸ್ಪೂರ್ತಿಯನ್ನು ನಿರಾಕರಿಸುತ್ತಲೇ ಜೀವನವನ್ನ ಪ್ರೀತಿಸುವ ಅಮೋಘ [ ದ್ವಂದ್ವ!!?] ನೀತಿಯಲ್ಲಿ ಬುದ್ದ ಮುನ್ನೆಡೆಯುತ್ತಾನೆ. ಜೀವ ಸೆಲೆ ಆಸೆಯೇ ದುಃಖಕ್ಕೆ ಮೂಲವೆಂದು ಆಸೆಯನ್ನು ಒಂದೇ ಕ್ಷಣದಲ್ಲಿ ಜರಿದು ಉಗಿದು ಉಪ್ಪುಹಾಕುತ್ತಾನೆ. ಆಸೆಗೂ ಹಲವು ಮಜಲಿದೆಯೇಂಬ ನಗ್ನ ಸತ್ಯ ಬುದ್ದನಿಗೆ ಅರ್ಧ ಸತ್ಯದಂತೆ ಗೋಚರಿಸಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಬದುಕಲ್ಲಿ ಅಸೆಯ ಚಿಲುಮೆ ಎಂದೆಂದೂ ಬತ್ತಬಾರದು ಎಂಬ ಕೃಷ್ಣನ ಸಿದ್ದಾಂತಕ್ಕೆ ಬುದ್ದ ಅಪವಾದವೆಂಬಂತೆ ಮೂಡುತ್ತಾನೆ. ಬುದ್ದನ ಸಿದ್ದಾಂತಗಳೇ ಕೊಂಚ ವಿಚಿತ್ರ ಎನ್ನಿಸುತ್ತವೆ. ಜೀವನದ ಎಲ್ಲಾ ಮಜಲುಗಳು ಆಸೆಯಿಂದ ಸುತ್ತುವರೆದಿವೆ... ಆಸೆಯ ಸೆಲೆ ಎಲ್ಲಿಗೇ ಒಯ್ದರೂ ಅದರ ಅಂತ್ಯ ದುಖ್ಖದ ಸಾಗರವೇ. So, ಬುದ್ದ ಹೇಳುತ್ತಾನೆ ಆಸೆಯೇ ಬೇಡ... ಸಮಸ್ತ ಸಾಕಾರತೆಯನ್ನೇ ತ್ಯಜಿಸಿ ನಿರಾಕಾರಿಗಳಾಗೋಣ. ಬುದ್ದನ ಈ Simple pricipled ಜೀವನ ಜನ ಸಾಮಾನ್ಯರಿಗೆ ತುಂಬಾನೆ ಇಷ್ಟ ಆಯಿತು. ಸರಳ ಸಿದ್ದಾಂತಗಳನ್ನ ಮತ್ತಷ್ಟು ಸರಳವಾಗಿ ತಿಳಿಸಿದ ಕ್ಷಣದಿಂದಲೇ ಜನ ಸಾಮಾನ್ಯರಲಿ ಸಾಮಾನ್ಯರಾಗುವ ಪಣತೊಟ್ಟರು. ಜೀವದ ಸೆಲೆ "ಆಸೆ" ಬತ್ತತೊಡಗಿತು. ಎಲ್ಲೆಲ್ಲೂ ಬೌದ್ದ ಭಿಕ್ಷುಗಳೇ.. ಭಾರತದಲ್ಲಿ ಹೊರಳುತ್ತಾ.. ತೆವಳುತ್ತಿದ್ದ ಬೌದ್ದಧರ್ಮ ಉಚ್ರಾಯ ಹಂತ ತಲುಪಿದ್ದು, ಅದಕ್ಕೆ ಹೊಸ ಆಯಾಮ ಕೊಟ್ಟ ಸಾಮ್ರಾಟ ಅಶೋಕನಿಂದಲೇ. ಅಖಂಡ ಸ್ಪೂತಿಯಿಂದಲೇ, ಜಗತ್ತನೇ ಗೆಲ್ಲುವ ಭರವಸೆಯೊಂದಿಗೆ ದಂಡಯಾತ್ರೆಮಾಡುತ್ತಾ, ಭಾರತದ ಉದ್ದಗಲಕ್ಕೂ ತನ್ನ ಖಡ್ಗ ಝಾಳಪಳಿಸುತ್ತಾ ವೀರ್ಯಮೆರೆಯುತ್ತಿದ್ದ ಅಶೋಕನ ಜೀವನ ಸೆಲೆಯನ್ನು ಸನ್ಯಾಸತ್ವದ ಬರಡು ಭೂಮಿಗೆ ಹರಿಸಿದ್ದೆ ಒಬ್ಬ ಬುದ್ಧನಿಂದ inspired ಆದ ಭಿಕ್ಷುವಿನಿಂದ . ಕೆರಳಿದ ಸಿಂಹ ಅಶೋಕ ಸಾಕ್ಷಾತ್ಕಾರದ ರಾಜ್ ಕುಮಾರ್ ಆಗಿದ್ದು ಆಗಿನಿಂದಲೇ. ರಾಜನ ಧರ್ಮ ಆಳುವುದು. ಚಾಣಕ್ಯನ ಕೈ ಕೆಳಗೆ ಪಳಗಿದ ಅಶೋಕನ ತಾತ ಚಂದ್ರಗುಪ್ತ ಮೌರ್ಯ ಕೊನೆಗಾಲದಲ್ಲಿ ಸ್ವೀಕರಿಸಿದ ಬೌಧ ಧರ್ಮವನ್ನು ನಿರ್ವೀರ್ಯಧರ್ಮವೆಂದು ಜರಿದ್ದಿದ್ದ ತರುಣ ಅಶೋಕನಿಗೆ ಅರ್ಥಪೂರ್ಣವಾಗಿ ಆಳುವ ನೀತಿ ಹೇಳಿದ್ದರೆ ಸಾಕಿತ್ತು. ಭಾರತದ ಇತಿಹಾಸಕ್ಕೊಂದು ಹೊಸ ಆಯಾಮ ಬರುತ್ತಿತ್ತು. ಆದರೆ ಬೌಧಧರ್ಮ ಸೇರಿದ ಅಶೋಕ ಬುದ್ದನ ಅಣತಿಯಂತೆ ಸನ್ಯಾಸಿಯಾದ... ಧರ್ಮ ಪ್ರಸಾರ ನಡೆಸಿದ.. ತನ್ನ ಮಕ್ಕಳನ್ನೂ ಧರ್ಮಪ್ರಸಾರಕ್ಕಚ್ಚಿದ. ರಾಜನಾಗಿಯೂ, ಜನರಕ್ಷಕನಾಗಿಯೂ ಮಾಡಬಹುದಾಗಿದ್ದ ಸಾಲು ಮರಗಳನ್ನು ನೆಡುವುದು, ರಸ್ತೆಯ ಅಭಿವೃದ್ದಿ, ಅನಾಥರ ಸೇವೆ, ಜನಸೇವೆ, bla bla bla.. ಎಲ್ಲವನ್ನು ಸನ್ಯಾಸಿಯಾಗಿ ಮಾಡಿದ. ರಾಜನಾಗಿ ರಾಜ್ಯಕ್ಕೆ ಕಟ್ಟಬೇಕಾದ ಜನಬಲವನ್ನು ಸೈನ್ಯಬಲವನ್ನಾಗಿಸದೆ ಸನ್ಯಾಸಿಗಳ ಬಲವಾಗಿಸಿದ. ಧರ್ಮದಲ್ಲಿ ಮೆರೆದ ಮಗಧ ರಕ್ಷಣೆಯಲ್ಲಿ ಸೊರಗತೊಡಗಿತು. ಅಲೆಕ್ಸಾಂಡರನ್ನು ಬೆದರಿ ಹಿಂತಿರುಗುವಂತೆ ಮಾಡಿದ್ದ ಮಗಧದ ಸೈನ್ಯವನ್ನ ಕೇವಲ 2 ತಲೆಮಾರಿನಲ್ಲಿ ಬೌದ್ದಧರ್ಮದ confusing ನಿರಾಕಾರ ತತ್ವ ನಿರ್ವೀರ್ಯವನ್ನಾಗಿಸಿತ್ತು. ನೀವೇ ಊಹಿಸಿ, ಅಶೋಕನ ನಂತರ ಅಶೋಕನ ಸಂತತಿಯವರೇ ಅಶೋಕನಷ್ಟೇ ಮುತುವರ್ಜಿಯಿಂದ ರಾಜ್ಯವಾಳಿದ್ದರೆ ಭಾರತ ಅಖಂಡವಾಗಿರುತ್ತಿತ್ತು. ಅರಬರ ದಾಳಿ, ಭಾರತದಲ್ಲಿ ಮುಘಲರು, ನಮ್ಮ ನೆರೆಯಲ್ಲಿ ಪಾಕಿಸ್ತಾನ.. ಎಲ್ಲ ಇರುತ್ತಲೇ ಇರಲಿಲ್ಲ... ಯಾರಿಗೆ ಗೊತ್ತು ಗಾಂಧಾರವನ್ನೇ[Quandhar] ತನ್ನ ಗಡಿ ಮಾಡಿಕೊಂಡಿದ್ದ ಅಶೋಕ ರಾಜನಾಗೆ ಉಳಿದಿದ್ದರೆ ಅರಬ್ ದೇಶವನ್ನೂ ತನ್ನ ಕಕ್ಷೆಗೆ ತೆಗೆದುಕೊಳ್ಳುತ್ತಿದ್ದನೋ ಏನೋ!!! ಎಲ್ಲ ಒಂದು "ರೆ" ಪ್ರಪಂಚವಷ್ಟೇ. ಒಟ್ಟಿನಲ್ಲಿ ಶಾಂತಿಯ ಹರಿಕಾರ ಬುದ್ದ ಭಾರತದ ಶಾಂತಿ ಕದಡಿದ್ದರಲ್ಲಿ ತನ್ನ ಪಾಲೂ ತೆಗೆದುಕೊಂಡ.
ಬುದ್ದನ ನಂತರದ ಭಿಕ್ಷುಗಳು ಬುದ್ದ ಹೀಗೆಳೆದ ವೈದಿಕ ಧರ್ಮದ ಕವಲುಗಳನ್ನೇ ತಮ್ಮ ನೆಲೆಗಳನ್ನಾಗಿಸಿದರು. ಬುದ್ದ ತೆಗಳಿದ ವೇದಗಳ ಸಾರದಲ್ಲೇ ತಮ್ಮ ತಮ್ಮದೇ ಆದ ಸಿದ್ಧಾಂತಗಳು ರೂಪಗೊಳ್ಳತೊಡಗಿದವು. ವೈದಿಕ ಧರ್ಮದ ಯಾವ ಅಂಶಗಳ ವಿರುದ್ದ ಸಿಡಿದೆದ್ದು ಬೌದ್ದಧರ್ಮದ ತಿರುಳನ್ನು ರಚಿಸಲಾಗಿತ್ತೋ ಅವೇ ಅಂಶಗಳಾದ ನಿರಂಕುಶ ಪ್ರಭುತ್ವ, ಅಧಿಕಾರ ದಬ್ಬಾಳಿಕೆ, ಧರ್ಮದ ಹೆಸರಲಿ ಅನಾಚಾರ ಎಲ್ಲವೂ ಬೌದ್ದರಲ್ಲೂ ಕಾಣಿಸಿಕೊಂಡವು. ನಾಳಂದ, ತಕ್ಷಶಿಲ, ಒಜೋದನ್ತಪುರಗಳಂಥ ಮಹಾ ವಿದ್ಯಾಲಯಗಳ ಪ್ರಕಾಶದಲೂ ಬೌದ್ದಧರ್ಮದ ಹುಳುಕುಗಳು ಎದ್ದೆದ್ದು ಕಾಣುತ್ತವೆ.
ಭಾರತಕ್ಕೆ ಹೊಸ ಭಾಷ್ಯ ಬರೆದ ಕೃಷ್ಣ.. ಭಾರತದ ಇತಿಹಾಸಕ್ಕೆ ನವ್ಯ ವ್ಯಾಖ್ಯಾನ ಬರೆದ ಬುದ್ದ.. ಅವರ ಸಿದ್ದಾಂತ... ಸಾಧನೆ ಎಲ್ಲವೂ ಅರಬರ ದಾಳಿಯೊಂದಿಗೆ ಕೊಚ್ಚಿ ಹೋದವು. ಏಕ ದೇವ ನಾಮ ಹಲವು ಎಂದಿದ್ದ ವೈದಿಕತೆಯನ್ನ ನಿರಾಕರಿಸಿದ ಬುದ್ದ... ದೇವರಿಲ್ಲ... ಮಾನವತೆ, ಶಾಂತಿಯೇ ನಮ್ಮೊಳಗಿನ ದೇವರೆಂದು ಸಾರಿದ.. ಹೀಗಂದ ಬುದ್ದನನ್ನೇ ದೇವರಾಗಿಸಿದ ಬೌದ್ದರು[ಬ್ರಾಹ್ಮಣರಂತೆ] ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಂಡರು. ನಂತರದಲ್ಲಿ ತಿಂದು ಕೊಬ್ಬಿದ್ದ ಇವರ ಅಂಡುಗಳಿಗೆ ಒದ್ದು ಬುದ್ದಿ ಹೇಳಲು ಪರಕೀಯರ ಪ್ರವೇಶವಾಯಿತು.
ನಂತರದ್ದು ಎಲ್ಲರಿಗೂ ತಿಳಿದದ್ದೇ.. ಶ್ರೀಮಾನ್ ಎಸ.ಎಲ್. ಭೈರಪ್ಪನವರ ಆವರಣ ಹಾಗು ಧರ್ಮಶ್ರೀ ಓದಿದರೆ ಸಾಕು ಕ್ರಿ.ಶ ೮ನೆ ಶತಮಾನದಿಂದ ೨೧ನೆ ಶತಮಾನದವರಗೆ ಭಾರತದ ಧಾರ್ಮಿಕ ಹೆಜ್ಜೆಗಳ ಗುರುತುಗಳ ಅನಾವರಣವಾಗುತ್ತದೆ. "ಸಾರ್ಥ"ವನ್ನು ಓದಿದ ನಂತರ ಯಾಕೋ ಹೀಗೆಲ್ಲ ಮನಸಿಗೆ ಅನ್ನಿಸಿತು.. ಹುಚ್ಚು ಮನಸ್ಸಿನ ಲಹರಿಯನ್ನ ಹತ್ತು ಹಲವು ಕಡೆ ಓಡಿಸಿ ಹಲವು ಸಾಲುಗಳನ್ನು ಕನವರಿಸಿದ್ದೇನೆ.
"ಧರ್ಮ ಎನ್ನುವುದು ಕೆಲವು ನಂಬಿಕೆ, ನಿಯಮ, ಆಚರಣೆಗಳಿಂದ ಕೂಡಿದ ಜೀವನ ಪದ್ಧತಿ. ಯಾವುದನ್ನು ವ್ಯಕ್ತಿ ಜೀವನದಲ್ಲಿ ನಂಬಿ ಅಳವಡಿಸಿಕೊಳ್ಳೂತ್ತಾನೋ ಅದೇ ಅವನ ಧರ್ಮ. ಇದು ಹುಟ್ಟಿನಿಂದ ಬರುವಂಥದ್ದಲ್ಲ ಎಂದು ನನ್ನ ಅನಿಸಿಕೆ." ಅದು ಊಟಕ್ಕೆ ಉಪ್ಪಿನ ಕಾಯಿಯಾಗಿರಬೇಕೆ ಹೊರಟು ಅದೇ ಊಟವಾಗಬಾರದು". ಆ ತರಹದ ಮರೀಚಿಕೆಯನ್ನ ಸೃಷ್ಟಿಸಿಯೇ ನಮ್ಮ ಧರ್ಮದ ಸಾರವನ್ನ ನಾವು ಕಳೆದು ಕೊಂಡೆವು.
"Religion is the reason The world is breaking up into peices".

ನಿಮ್ಮ
ಅವೀನ್
6 comments:
ಉತ್ತಮ ವೈಚಾರಿಕ ಲೇಖನ.
Thanks Sunaath Sir, for your valuable comment!!!
Good article Aveen..
ಯೋಚನೆ ಮಾಡಬೇಕಾದ ವಿಷಯಗಳನ್ನೇ ಬರೆದಿದ್ದೀರಿ.
Well done.. Keep posting.
ಗೆಳೆಯ ಅವೀನ್,
ಪ್ರಭುದ್ದ ವೈಚಾರಿಕತೆ...ಸಮತ್ವ ಬಿಂಬಿಸುವ ನಿರೂಪಣೆ....ತುಂಬಾ ಮುಳುಗಿ ಬರೆದಿದ್ದೀರಿ......ಹೀಗೆ ಬರಿತ ಇರಿ ನಮ್ಮನ್ನ ಚಿಂತನೆಗೆ ಹಚ್ಚಲು.
ವಂದನೆಗಳು,
ಸುನಿಲ್.
Excellent write-up. Liked the way you have put your thoughts.
--Basavaraj Vannur
nice and interesting.....
good blog...
Post a Comment