ಒಂದೇ ಬೈಕಿನಲ್ಲಿ 3 ಜನ ಬುದ್ದಿಗೇಡಿ ವಕೀಲರು ಬರುತ್ತಿದ್ದಿದ್ದನ್ನು ಕಂಡ ಪೇದೆ ಕೇಳಿದ್ದೇ ತಡ, ಕಳ್ಳು ಕುಡಿದ ಕೋತಿಯಂತೆ ಹಲ್ಲೆ ಮಾಡಿದ್ದೇ ಅಲ್ಲದೆ ಅಂಡು ಸುಟ್ಟ ಬೆಕ್ಕುಗಳಂತೆ ಹೀಗೆ 7 ಘಂಟೆಗಳ ಕಾಲ "freedom for expression" ಹೆಸರಿನಲ್ಲಿ ಈ ಪರಿಯ ಗೂಂಡಾಗಿರಿ ಮಾಡಬಹುದೇ?
ಇಂಥಾ ಹುಂಬರಿಗೆ ಆಂಡಿಗೆರಡು ಕೊಡದೆ ಪೊಲೀಸರೂ ಕೂಡ ಸಂಧಾನದ ಹೆಸರಿನಲ್ಲಿ ಹುಲಿ-ಕುರಿ ಆಟ ಆಡಬಹುದೇ? ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಜನತೆಯ ನೆಮ್ಮದಿಯನ್ನೇ ಹರಾಜಿಗಿಟ್ಟ ಈ ಇಬ್ಬಂದಿಗಳಿಗೆ ಶಿಕ್ಷಿಸೋರು ಯಾರು? ಊರಿಗೆಲ್ಲ ಬುದ್ದಿ ಹೇಳುವ ಬೆಕ್ಕು ಒಲೆ ಮುಂದೆ ಉಚ್ಚೆ ಹುಯ್ದರೆ ಎಂತ ಮಾಡೋದು?
ಹಸಿವು, ಬೆದರಿಕೆಯಿಂದ ಕಂಗೆಟ್ಟು ಅತ್ತ ಮಕ್ಕಳು, ಇಹ-ಪರ ತಿಳಿಯದ ಪೋಷಕರು, ಕುಳಿತಲ್ಲೆ ಕಲ್ಲಾದ ವೃದ್ದರು, ಭಾಷೆ ಬಾರದೆ ಕಿದ್ವಾಯಿ ರಸ್ತೆ ತಿಳಿಯದೆ ಕಂಗೆಟ್ಟ ಪರವೂರಿನ ಅನಾರೋಗ್ಯಪೀಡಿತನ ಬಸುರಿ ಹೆಂಗಸು, ತ್ರಿಶಂಕು ಸ್ಟಿತಿಯಲ್ಲಿನ ಪ್ರಯಾಣಿಕರು, ಜನತೆಗೆ ಮಾರ್ಗದರ್ಶನ ಮಾಡದೆ ನಂ.1 ಗುಂಗಿನಲ್ಲೇ ತಗಲಾಕೊಂಡ ಎಫ್ ಎಂಗಳು.....ಡೈರಿ ವೃತ್ತದಿಂದ ಮಲ್ಲೇಶ್ವರ ತಲುಪಲು 4 ಘಂಟೆ 30 ನಿಮಿಷ.
ಇವರು ನಮ್ಮ so called ನಾಗರೀಕ ವಕೀಲರು, ಮಣ್ಣಿಗೆ ಹೋಗಲಿ ಇವರ ನಾಗರೀಕತೆ..... ಜನಸಾಮಾನ್ಯರ ದುಗುಡವನ್ನು ಅರಿಯದ ಈ ಮಂಕುದಿಣ್ಣೆಗಳಿಗೆ ನಮ್ಮ ಘನ ನ್ಯಾಯ ಕಾಯುವ ಕೆಲಸ.
ನಿಜಕ್ಕೂ ಇಂಥಾ ಬೇಜವಾಬ್ದಾರಿ ಹೀನಸುಳಿ ಜನರ ಹೊಲಸು ಕೆಲಸ, ಕಾದು ನೋಡುವ ತಂತ್ರದ ರಾಜಕಾರಣಿಗಳು....!!!!
ಇಂಥವರಿದ್ದರೆ ನ್ಯಾಯದೇವತೆಯ ಕಣ್ಣಷ್ಟೇ ಯಾಕೆ? ಮೈಯನ್ನೂ ಕೂಡ ಕಪ್ಪು ಬಟ್ಟೆಯಲ್ಲೇ ಸುತ್ತಬೇಕು.
1 comment:
ಅವೀನ್,
ನೀವು ಹೇಳುವದು ತುಂಬ ಸರಿಯಾಗಿದೆ. ಈ ವಕೀಲರು ಚೆನ್ನೈ ಹಾಗು ಇತರ ಕೆಲವು ಪಟ್ಟಣಗಳಲ್ಲಿ ಮಾಡಿದ ಗೂಂಡಾಗಿರಿಯ ಸಮಾಚಾರ ಸಹ ಈಗಾಗಲೇ ಪ್ರಸಿದ್ಧವಾಗಿದೆ.
ಸರಕಾರದವರು ಇವರನ್ನೆಲ್ಲ ಎತ್ತಿ ಜೇಲುಗಳಲ್ಲಿ ಒಗೆಯಬೇಕು.
ನ್ಯಾಯವನ್ನು ಪಾಲಿಸಬೇಕಾದ ನ್ಯಾಯವಾದಿಗಳೇ ಹಿಗೆ ಮಾಡಿದರೆ ಹೇಗೆ?
Post a Comment