ಅಂದಕಾಲತ್ತಿಲ್ ಈ ಮಾತಿತ್ತು. ಹೆರುವ ಮಕ್ಕಳಿಗನುಗುಣವಾಗಿ ಪಟ್ಟದರಸಿ ಪಟ್ಟವೂ ಗಿಟ್ಟುವ ಕಾಲವಿತ್ತು. ಇಂದು ಮಾತೆಗೆ ಈ ಮಾತೇ heavy ಆಗಿದೆ. ಸುಕ್ಕೂ ಚದುರದೆ ಹೆರುವ ಕಷ್ಟ ಹಾಗಿರಬಹುದೇನೋ?!! ಬಿಡಿ, ಗಂಡಸಿಗ್ಯಾಕೆ ಗೌರಿ ದುಖ:. ಸ್ವಂತ ಮನೆಯ ನನಸಿನೊಂದಿಗೆ ಅಮ್ಮ ಮಕ್ಕಳ ಜಂಜಾಟಕ್ಕೆ ಒಂದು break ಕೊಟ್ಟು, ದೇವ ಮಂದಿರಗಳಲ್ಲಿ ಮನಶಾಂತಿ ಹುಡುಕುವ ವಯಸ್ಸಿನಲ್ಲಿ ಮೂಕ ಜೀವಗಳಲ್ಲಿ ಕಂಬ-ಗೋಡೆಗಳ ನಡುವೆ ಸಿಗದ ಮನಶಾಂತಿ ಕಂಡುಕೊಂಡಿದ್ದಾಳೆ.
3 ವರುಷದ ಕೆಳಗೆ ನನ್ನ ಪಾಲಿನ ಕೈತುತ್ತು ಕಸಿದುಕೊಂಡ ಜಿಮ್ಮಿ, ಈಗ ಅಮ್ಮನೊಡನೆ ಕಳೆಯುವ ಸಮಯದಲ್ಲೂ ಪಾಲು ಕೇಳುತ್ತಿರುವ ರಾಮ-ಲಕ್ಷ್ಮಣ, ಶೀಘ್ರದಲ್ಲೇ ನಿರೀಕ್ಷಿಸಿರುವ 5-6 ಹಾರಲಾರದ 2 ಕಾಲಿನ ಅಪ್ಸರೆಯರು...... ನಾನುಗಳ ನಡುವೆ ಅವಳದಾಗಿ ಉಳಿಯದ ಮಕ್ಕಳಿಗಿಂತ "ನಾವುಗಳ" ಸಿದ್ದಾಂತದಲ್ಲಿ ನಂಬಿಕೆ ಇಟ್ಟವರೊಂದಿಗೆ ಅಮ್ಮ ಕಳೆದುಹೋಗುತ್ತಿದ್ದಾಳೆ.
ಅಮ್ಮ ಕಂಡುಕೊಂಡ ಮನಶಾಂತಿಗಾಗಿ ಖುಷಿಪಡುವುದೋ, ನಾನು ಕಳೆದುಕೊಂಡ ಅಮ್ಮನ ಒಡನಾಟದ ಗಳಿಗೆಗಳಿಗಾಗಿ ಮರುಗುವುದೊ.... ಒಟ್ಟಿನಲ್ಲಿ ತಿಂಗಳ ಮುಂಚೆಯೇ ನನ್ನ ಜೀವನದಲ್ಲಿ ಬೇವು-ಬೆಲ್ಲದ ಯುಗಾದಿ ಬಂದಿದೆ.
2 comments:
ನಮ್ಮದಿಯ ಹೊಸ ತಾಣಗಳನ್ನು ಕಂಡುಕೊಳ್ಳುವದು ಮನುಷ್ಯಜೀವಿಗೆ ಸಹಜವೇ ಅಗಿದೆ!
ನಿಜ ಸುನಾಥ್ ಸಾರ್,
ಯಾಕೋ ಅಣ್ಣಾವ್ರ "ವಿನೋದವೊ ವಿಷಾದವೊ ಹೊಂದಿಕೊಳ್ಳುವ" ಎನ್ನುವ ಸಾಲು ನಿಜಕ್ಕೂ ಅರ್ಥಗರ್ಭಿತವಾಗಿವೆ.
Post a Comment