ಬೆಳೆಯುವ ಪ್ರತೀ ಹಂತದಲ್ಲಿ ಸಾಯುವ ಮುಗ್ಧತೆ ಕಾಲಾಂತರದಿ ಬೇರೂರಿ ನಿಂತ
ಆಸ್ತಿಕತೆಗೆ ಒಂದೊಂದೇ ಕೊಡಲಿ ಪೆಟ್ಟನ್ನು ಹಾಕಿದೆ. ಅಜ್ಜಿ ಕಥೆಯ 7 ಸಾಗರದಾಚೆಯ ರಾಜಕುಮಾರಿ ಇಂದಿನ ತಲೆಮಾರಿಗೆ ಕೇಟ್ ವಿನ್ಸ್ಲೆಟ್, ಅಂಜೆಲಿನಾಜೂಲಿಯ ಪ್ರತಿರೂಪವಷ್ಟೆ.
ಅಡ್ಡಿ ಇಲ್ಲ... ಮುಗ್ದತೆ ಸಾಯಲೇ ಬೇಕು. ಅದರ ಸಾವಲ್ಲೇ ಜಗತ್ತಿನ ಬದುಕಿದೆ. ಆ ಬದುಕಿನಲ್ಲೇ ಇತಿಹಾಸದ ಅಸ್ತಿತ್ವವಿದೆ. ಕಳೆದ ವರುಷ ನಮ್ಮ ಮುಗ್ದತೆಯ ಒಂದು ಮಜಲನ್ನು ಕೊಂದಿದೆ. ಬದುಕಿನ ಗೋಡೆ ಇನ್ನೊ ಒಂದು ಹಂತಕ್ಕೆ ಮೇಲೇರಿದೆ. ಸಾವು-ಬದುಕಿನ ಲಾಸ್ಯದಂತಹ ಬೇವು-ಬೆಲ್ಲದ ಯುಗಾದಿ ಮತ್ತೆ ಬಂದಿದೆ..... "Be Practicle"ನಂತಹ ಬೇವಿನ ಬದುಕಿಗೆ ಆಸ್ತಿಕತೆಯೆಂಬ ಬೆಲ್ಲವೂ ಕೊಂಚ ಸೇರಲಿ. "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು", ಅಲ್ಲವೇ?
ನಿದ್ರಿಸಿರುವ ನಿಮ್ಮ ಆಸ್ತಿಕತೆಗೊಂದು ಮೊಟಕಿ, ಇಂದಾದರೂ ಮುಗ್ದತೆಯನ್ನ ಆಹ್ವಾನಿಸಿ. ಅದರೊಡಗೂಡಿ ದೇಸಿ ಸೊಗಡಿನ ಯುಗಾದಿಯನ್ನ ಆಚರಿಸಿ. ಸರ್ವಗಣ ಪ್ರಥಮ ಗಣುಮಾಮ ನಿಮ್ಮಗಳ ಬದುಕಿನ ಅನುದಿನವನ್ನೂ ಸಂತೋಷಕರವಾಗಿಡಲಿ ಎಂಬ ಹಾರೈಕೆಯೊಂದಿಗೆ
ನಿಮ್ಮ
ಅವಿ
2 comments:
ಯುಗಾದಿಯ ಶುಭಾಶಯಗಳು...
ನಿಜಕ್ಕೂ ಸೂಕ್ತ ಮಾತು....ದೇಸಿ ಸೊಗಡಿನ ಆಚರಣೆಗೆ ಈ ಮುಗ್ದತೆ ಬೇಕೇ ಬೇಕು...
ಅಜ್ಜಿ ಕತೆಯ ನೆನಪಾಗಿ, ಅಜ್ಜಿಯನ್ನು ಕುಳ್ಳರಿಸಿ ಕತೆ ಕೇಳುವ ಬಯಕೆ ಯಾಗುತ್ತಿದೆ...
ಧನ್ಯವಾದಗಳು...
ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರ ನಿಮಗೆ ಸುಖ,ಶಾಂತಿಯನ್ನು ತರಲಿ.
Post a Comment