Thursday, April 16, 2009

ಪರಿವರ್ತನ




ಪರಿವರ್ತನೆಯ ಸೊಬಗಿನ ಪರಿವೆ ಇಲ್ಲದೆ
ನಿಂತ ನೀರಂತೆ ತಾನೇ ತಾನಾಗಿಹುದು ಪರಿವರ್ತನ
ಎಲ್ಲೆಲೂ, ಎಲ್ಲಾನೂ, ಹೇಗ್ಹೇಗೋ ಪರಿವರ್ತನ
ಹಿಂದೆಂದೂ, ಮುನ್ನೆಂದೂ, ಇನ್ನೆಂದೂ
ತಾನೇ ತಾನಾಗಿಹುದು ಪರಿವರ್ತನ..

ವನದಲ್ಲಿ, ಮನದಲ್ಲಿ, ಮನೆಯಲ್ಲಿ, ಜನರಲ್ಲಿ
ಪರಿವರ್ತನ ಹಪಹಪಿಸೋ ಪರಿವರ್ತನ
ಪರಿವರ್ತನ ಜಗದೆಲ್ಲೆಡೆ ಪರಿವರ್ತನ
ನೀ ಒಲ್ಲೆನೆಂದರೂ ಮಾಡಬೇಕದರೊಡನೆ ಸಹನರ್ತನ
ಪರಿವರ್ತನ ಜಗದ ನಿಯಮ ಕಣಾ.

ಹಿಂದಿದ್ದ, ಇಂದಿರುವ, ಮುಂದಿದ್ದ, ಮುಂದಿರುವ ಜನರಲ್ಲಿ
ಸಂಚಲನ ಮಾಡಿಟ್ಟು, ಸಹಚರ್ಯೆಯಾಗಿತ್ತು, ಪರಿ ಪರಿ ಕಾಡಿತ್ತು
ಆಳಾಗಿ ಬಿದ್ದಿತ್ತು, ಅರಸಾಗಿ ಎದ್ದಿತ್ತು , ಭಾರ್ಯೆಯಾಗಿತ್ತು
ವೇಶ್ಯೇಯಾಗಿತ್ತು, ತಲೆ ತಿರುಗಿ ಬಿದ್ದಿತ್ತು, ತಲೆ ಹಿಡಿದು ಎದ್ದಿತ್ತು
ಪರಿವರ್ತನ ಹುಚ್ಚು ಪರಿವರ್ತನ

ಬಾಯ್ಬಿರಿದ ಜನಕೆ ಮೊಲೆ ಉಣಿಸ ಬಂದಿತ್ತು
ಬರ ಹಿಡಿದ ಭುವಿಗೆ ಮಧುಸಿಂಚನವಿರಿಸಿತ್ತು
ಚಗವೆರ, ಡಯಾನ, ವಿವೇಕಾನಂದ, ಫುಕೋಕ ಪರಿವರ್ತನದಲ್ಲಾದರು ಪರಿವರ್ತನ
ಪೂರ್ವಜರ ರಕ್ತದೋಕುಳಿ ಕೆಂಪಲ್ಲಿ ನಮ್ಮ ಸುಖದಂತೆ
ನಮ್ಮದರಲ್ಲಿ ನಮ್ಮವರದಾಗದನ್ಥೆ ತಡೆಯಲಿರುವುದೊಂದೇ


ಪರಿವರ್ತನ


@copy right "Aveen"

4 comments:

ಅನಿಕೇತನ ಸುನಿಲ್ said...

ಅವೀನ,
ತುಂಬಾ ಚೆನ್ನಾಗಿದೆರೀ...ಆಳವಾದ ಮಂಥನ.
ಭಗವದ್ಗೀತೆಯಿಂದ ಶುರುವಾಗಿ ಎಲ್ಲೆಲ್ಲಿಯೋ ಹೋಗಿ ಎಲ್ಲವನ್ನೂ ಸವರುವ ಪ್ರಯತ್ನ.
Keep it up...:-)
ಅನಿಕೇತನ ಸುನಿಲ್

umesh desai said...

ಸುಪರ್ ಆಗಿದೆ ಪರಿವರ್ತನ, ಅಪ್ಪುಗೆ
ನನ್ನ webpage usdesai.blogspot.com ಗೆ
ಒಮ್ಮೆ ಭೇಟಿಕೊಡಿ....

sunaath said...

ಅವೀನ,
ಹೊಸ ರೀತಿಯ ಕವನಗಳನ್ನು ಓದುತ್ತಾ ಇದ್ದೀನಿ.
ಖುಶಿಯಾಗ್ತಾ ಇದೆ.

Unknown said...

hosa article bega barlila andre nodi... sumne update madri