Tuesday, December 31, 2013

ಮರಳಿ ಬಾ ಮನ್ವಂತರವೇ ........


ಅಪಶಕುನದ ಹದಿಮೂರು ಮೂಡಿಸಿದ್ದು ಹದವಿರದ ಅಪಶ್ರುತಿ!! ಸೋತು ಗೆದ್ದವರು ಹಾಗು ಗೆದ್ದು ಸೋತವರ ಕಾಗಕ್ಕ ಗುಬ್ಬಕ್ಕ ಕಥೆಗಳೇ ಜಗತ್ತ್ತಿನೆಲ್ಲೆಡೆ ….!!

ಪರಿವರ್ತನದ ನಿರೀಕ್ಷೆಯಲ್ಲಿ ಕಳೆದ ಮಗದೊಂದು ವರುಷ. ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು  ಅನ್ನುವಂತೆ  ಜಗತ್ತಿನೆಲ್ಲೆಡೆ ಮುಖಭಂಗಕ್ಕಾದ ಅಮೇರಿಕಾ ಎನ್.ಎಸ್.ಎ  ಸಿದ್ದಾಂತ, ಅಳಿದುಹೋದ ಸಿರಿಯ… ಅಳಿದು ಉಳಿದ ಮಂಡೇಲಾ, ನಲುಗಿದ ಸುಡಾನ್, ತಮ್ಮ  ಇರುವನ್ನು ಮತ್ತೆ  ಮತ್ತೆ ಸಾರಿ ಆತಂಕ ಮಡುಗಟ್ಟಿಸಿದ ಭಯೋತ್ಪಾದನೆ, ಬದಲಾವಣೆ ಪರ್ವ ಕಂಡ ಭಾರತದ ರಾಜಕೀಯ ..... ಆಗಾಗ ಮುನಿದ ಪ್ರಕೃತಿ, ಉಳಿದಂತೆ ಮತ್ತದೇ ಬೇಸರ, ಅದೇ ಏರಿಳಿತದ ಹಗ್ಗ ಜಗ್ಗಾಟ, ಅದೇ ನಿಟ್ಟುಸುರಿನ ನಿನ್ನೆಗಳು, ಭರವಸೆಯ ನಾಳೆಗಳು.

“ಮರೆವೆಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು”

ಉರುಳಿ ಅರಳಿದ ಗದ್ದುಗೆಗಳಲ್ಲಿ ಪವಡಿಸಿದ ಜನ ಸಾಮಾನ್ಯ…. ಕಳಚಿದ ಮುಗ್ದತೆಯಲ್ಲಿ ಮರೆತ ದೇಸೀಯತೆ … ಒಟ್ಟಿನಲ್ಲಿ ವರ್ಷಾಂತ್ಯದಲ್ಲಿ ಅಸ್ಥಿರತೆಯ ಅಂತ್ಯ.

“ನೀಡು ಬಾ ಮನ್ವಂತರವೇ ಭಾವಕೆ ಉಸಿರನ್ನು,ಬರಡು ಹೃದಯಗಳಿಗೆ ಜೀವದ ಹಸಿರನ್ನು…”






2 comments:

sunaath said...

ನಿಮ್ಮ, ನಮ್ಮ ನಿರೀಕ್ಷೆ ಸಫಲವಾಗಲಿ, ಹೊಸ ವರ್ಷ ಶುಭಕರವಾಗಲಿ.

I am no one said...

chanda untu...innu nimma halavu barahagala neereksheyalli :)